ಜೈವಿಕ ಕಾರಕಗಳು
ಒಂದು ಪರಿಸರದಲ್ಲಿ ಬದುಕಿರುವ ಜೀವಿಯ ಇಲ್ಲವೆ ಜೀವಿಗಳ ಮೇಲೆ ಪರಿಸರದಲ್ಲಿನ ಇತರ ಜೀವಿಗಳು-ಸಸ್ಯಗಳು ಹಾಗೂ ಪ್ರಾಣಿಗಳು-ಪ್ರಭಾವವನ್ನು ಬೀರುತ್ತವೆ. ಇಂಥ ಜೀವಿಗಳಿಗೆ ಜೈವಿಕ ಕಾರಕಗಳೆಂದು (ಬಯಾಟಿಕ್ ಫ್ಯಾಕ್ಟರ್ಸ್) ಹೆಸರು.

	ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ಉತ್ಪತ್ತಿ ಮಾಡಿಕೊಳ್ಳುವುದರಿಂದ ಅವು ಸ್ವತಂತ್ರ ಜೀವಿಗಳೆನಿಸಿಕೊಳ್ಳುತ್ತವೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವೂ ಸ್ವತಂತ್ರವಲ್ಲ. ಅವುಗಳ ಜೀವನ ಇತರ ಜೀವಿಗಳನ್ನು ಅವಲಂಬಿಸಿದೆ. ಉದಾ : ಸಸ್ಯಗಳಲ್ಲಿನ ಪರಾಗಾರ್ಪಣೆಗೆ ಜೇನುನೊಣಗಳು ಅಗತ್ಯ. ಅಂತೆಯೇ ಬೀಜ ಮತ್ತು ಹೆಣ್ಣುಗಳ ಪ್ರಸಾರ ಕೀಟಗಳಿಂದ, ಪ್ರಾಣಿಗಳಿಂದ, ಹಕ್ಕಿಗಳಿಂದ ನಡೆಯುತ್ತದೆ. ಪೈನಸ್ ಮುಂತಾದ ಮರಗಳು, ನೀರು ಹಾಗೂ ಲವಣಗಳನ್ನು ಹೀರಿಕೊಳ್ಳಬಾಕಾದರೆ ಅವುಗಳ ಬೇರಿನ್ಲಲಿ ಬೂಷ್ಟು ಜಾತಿಯ ಸಸ್ಯಗಳು ಎರಬೇಕು. ಸಸ್ಯಗಳಿಗೆ ಬೇಕಾದ ಕಾರ್ಬನ್ ಡೈ ಆಕ್ಸೈಡ್ ಇತರ ಜೀವಿಗಳ ಉಸಿರಾಟದಿಂದ ದೊರೆಯುತ್ತದೆ. ಉಸಿರಾಟಕ್ಕೆ ಅಗತ್ಯವಾದ ಆಕ್ಸಿಜನ್ ಶತಶತಮಾನಗಳ ಹಿಂದೆ ಜೀವಿಸಿದ್ದ, ಜೀವಿಸಿರುವ ಸಸ್ಯಗಳಿಂದ ದೊರೆತಿದೆ, ದೊರೆಯುತ್ತಿದೆ. ಒಂದು ಸ್ಥಳಕ್ಕೆ ಬೇಕಾದ ಉಷ್ಣ, ಬೆಳಕು, ಆದ್ರ್ರತೆ ಹಾಗೂ ಪೋಷಕಾಂಶಗಳು ಅಕ್ಕಪಕ್ಕದಲ್ಲಿ ಬೆಳೆದ ಸಸ್ಯಗಳಿಂದ ಬರಬೇಕು. ಮಣ್ಣಿನಲ್ಲಿರುವ ಬಹುತೇಕ ನೈಟ್ರೋಜನೆ ಜೀವಮೂಲಗಳಿಂದ ಬಂದುದು. ಈ ಕಾರಣಗಳಿಂದ ಸಸ್ಯ ಸ್ವತಂತ್ರವಾಗಿದೆ ಎನ್ನುವುದು ಅಷ್ಟು ಸರಿಯಲ್ಲ. ಯಾವ ಜೀವಯನ್ನೇ ತೆಗೆದುಕೊಂಡರೂ ಅದರ ಸುತ್ತಮುತ್ತಣ ಪರಿಸರ ಭೌತ ಮತ್ತು ಜೈವಿಕ ಕಾರಕಗಳ ಸಂಮಿಶ್ರ ಎಂಬುದು ಸ್ಪಷ್ಟ.

	ಜೀವಿಗಳು ತೋರುವ ಸಹಬಾಳ್ವೆಯಲ್ಲಿ ವೈವಿಧ್ಯವುಂಟು. ಎರಡು ಜೀವಿಗಳು ಪರಸ್ಪರ ಅನುಕೂಲಕ್ಕಾಗಿ ಕೂಡಿಕೊಂಡು ಬದುಕುವುದು ಒಂದು ರೀತಿ. ಒಂದು ಜೀವಿ ಮತ್ತೊಂದನ್ನು ತನ್ನ ಅನುಕೂಲಕ್ಕಾಗಿ ಮಾತ್ರ ಆಶ್ರಯಿಸಿ ಬದುಕುವುದು ಮತ್ತೊಂದು ರೀತಿ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಸಸ್ಯಗಳನ್ನು ಅವಲಂಬಿಸಿವೆ. ಅದೇ ರೀತಿ ಕೆಲವು ಸಸ್ಯಗಳು ತಮಗೆ ಬೇಕಾದ ನೈಟ್ರೋಜನ್ ವಸ್ತುಗಳಿಗೆ ಕ್ರಿಮಿಕೀಟಗಳನ್ನು ಆಶ್ರಯಿಸಿವೆ.

	ಚಿಟ್ಟೆಗಳು, ಹಕ್ಕಿಗಳು ಮತ್ತು ಇತರ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಹೂವಿಂದ ಹೂವಿಗೆ ಹೋಗುವಾಗ ತಮಗೆ ಅರಿವಿಲ್ಲದಂತೆಯೇ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸುತ್ತವೆ. ಶಿಲೀಂಧ್ರಗಳನ್ನು ಆಹಾರವಾಗಿ ಉಪಯೋಗಿಸುವ ಚಿಟ್ಟೆಗಳಿಂದ ಇವುಗಳ ಬೀಜಾಣುಗಳ ಪ್ರಸಾರ ನಡೆಯುತ್ತದೆ. ಜಾಲಿ ಜಾತಿಯ ಕೆಲವು ಮರಗಳ ಮುಳ್ಳುಗಳ ಬುಡಗಳಲ್ಲಿ ಇರುವೆಗಳು ಸೇರಿಕೊಂಡು ಶತ್ರುಗಳಿಂದ ಮರಗಳನ್ನು ರಕ್ಷಿಸುತ್ತವೆ.

	ಭೀಷ್ಮ ಬಳ್ಳಿಗಳು ಬೆಳೆದು ಹಬ್ಬಲು ಕೆಲವು ಮರಗಳು ಆಧಾರವಾಗಿರುತ್ತವೆ. ಇಂಥ ಬಳ್ಳಿಗಳು ಆಧಾರಮರಗಳ ರೆಂಬೆಗಳನ್ನು ನುಲಿದುಕೊಂಡು ಬೆಳೆದಾಗ ಆಧಾರವಿತ್ತ ಮರಗಳೇ ನಾಶವಾಗುವುದುಂಟು. ನಿತ್ಯಹರದ್ವರ್ಣದ ಕಾಡುಗಳಲ್ಲಿ ಮರಗಳ ಅಡ್ಡರೆಂಬೆಗಳ ಮೇಲೆ ಅಪ್ಪುಗಿಡಗಳು ಬೆಳೆಯುತ್ತವೆ. ವಾಯುವಿನಲ್ಲಿರುವ ತೇವವನ್ನು ಹೀರಿ ತಮಗೆ ಅಗತ್ಯವಾದ ನೀರನ್ನು ಇವು ಒದಗಿಸಿಕೊಳ್ಳುತ್ತವೆ. ಅಜೆóೂೀಲದ ಎಲೆಗಳಲ್ಲಿರುವ ಕುಹರಗಳಲ್ಲಿ ಅಂತಾಸರಸ್ ಎಂಭ ಶೈವಲ ಸಸ್ಯ ಬೆಳೆದು ಸಹಬಾಳ್ವೆ ನಡೆಸುತ್ತದೆ.

	ಮಣ್ಣಿನಲ್ಲಿ ಬ್ಯಾಕ್ಟೀರಿಯಗಳು ವಾಸಿಸುತ್ತವೆ. ಸಸ್ಯ ಹಾಗೂ ಪ್ರಾಣಿ ಪದಾರ್ಥಗಳೇ ಇವಕ್ಕ ಆಹಾರ. ಈ ಪದಾರ್ಥಗಳು ಬ್ಯಾಕ್ಟೀರಿಯಗಳ ದಾಳಿಗೆ ತುತ್ತಾಗಿ ಕೊಳೆಯತೊಡಗುತ್ತವೆ. ಈ ಸಮಯದಲ್ಲಿ ಇನ್ನು ಕೆಲವು ಬಗೆಯ ಬ್ಯಾಕ್ಟೀರಿಯಗಳು ಅಮೋನಿಯವನ್ನು ನೈಟ್ರೈಟ್ ಮತ್ತು ನೈಟೇಟ್‍ಗಳಾಗಿ ಪರಿವರ್ತಿಸಿ ಸಸ್ಯಗಳಿಗೆ ಅಗತ್ಯವಾದ ನೈಟೇಟನ್ನು ಒದಗಿಸುತ್ತವೆ. ವಾತಾವರಣದಿಂದ ನೈಟ್ರೋಜನ್ ಅನಿಲವನ್ನು ಹೀರಿಕೊಂಡು ಅದನ್ನು ಸ್ಥೀಕರಿಸುವ ಬ್ಯಾಕ್ಟೀರಿಯಗಳೂ ಉಂಟು. ಇಂಥವು ಸತ್ತ ಪ್ರಾಣಿಗಳನ್ನೂ ಬೇರು ಮತ್ತು ಎಲೆಗಳನ್ನೂ ಕೊಳೆಯಿಸುವುದರ ಮೂಲಕ ನೆಲದ ಸಾರವನ್ನು ಹೆಚ್ಚಿಸುವುದಲ್ಲದೆ ನೆಲದ ಜಲಧಾರಣಾ ಸಾಮಥ್ರ್ಯವನ್ನೂ ಹೆಚ್ಚಿಸಿ ಸಸ್ಯಗಳ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತವೆ. ಇದೇ ರೀತಿ ಎರೆಹುಳುಗಳು ಮಣ್ಣನ್ನು ಸಡಿಲಗೊಳಿಸಿ ವಾಯುಪ್ರದೇಶಕ್ಕೆ ಅನುಕೂಲ ಮಾಡುತ್ತವೆ. ನೆಲದಲ್ಲಿ ಬಾಳುವ ಎಲ್ಲ ಜೀವಿಗಳೂ ಹೀಗೆ ಉಪಯುಕ್ತವೆಂದೇನೂ ಅಲ್ಲ. ಬೇರುಗಳನ್ನು ತಿರುವಿ ಹಾಕಿ ಸಸ್ಯಗಳಿಗೆ ಹಾನಿಯುಂಟುಮಾಡುವ ನೆಮಟೋಡ ಜೀವಿಗಳೂ ಮಣ್ಣಿನಲ್ಲುಂಟು. ಅಲ್ಲದೆ ಹುಲ್ಲು, ಎಲೆಗಳನ್ನು ತಿಂದು ಬದುಕುವ ಪ್ರಾಣಿಗಳಿಂದ ಸಸ್ಯಸಂಪತ್ತಿಗೆ ನಷ್ಟವುಂಟಾಗುತ್ತದೆ. ಹುಲ್ಲುಗಾವಲಿನಲ್ಲಿ ಕೆಲವು ಹುಲ್ಲುಗಳು ಮಾತ್ರ ದನಕರುಗಳಿಗೆ ಮೆಚ್ಚಾಗಿರುವುದರಿಂದ ಇಂತ ಹುಲ್ಲುಗಳನ್ನೇ ಅವು ತಿನ್ನುತ್ತವೆ. ಇದರಿಂದ ಇಂಥ ಹುಲ್ಲುಗಳು ನಾಶವಾಗಿ ಅಪ್ರಿಯವಾದ ಸಸ್ಯಗಳು ಬೆಳೆಯಲು ಅವಕಾಶವಾಗುತ್ತದೆ. ನೆಲದ ಮೇಲೆ ಸಸ್ಯಗಳು ಅಧಿಕ ಪರಿಮಾಣದಲ್ಲಿ ನಾಶವಾದರೆ ನೀರು ಮತ್ತು ಗಾಳಿಗಳಿಂದ ಮಣ್ಣು ಕೊಚ್ಚಿಹೋಗುತ್ತದೆ. ಇದರಿಂದ ನೆಲದ ಫಲವಂತಿಕೆ ಕಡಿಮೆಯಾಗುತ್ತ ಬಂದು ಅದು ಕಾಲಕ್ರಮೇಣ ಬಂಜರಾಗಬಹುದು. ಸಸ್ಯಾಹಾರಿಗಳಾದ ಕುರಿ, ಮೇಕೆ, ಜಿಂಕೆ ಮುಂತಾದವು ಸಾಮಾನ್ಯವಾಗಿ ಆಗತಾನೇ ಚಿಗುರಿದ ಸಸ್ಯಭಾಗಗಳನ್ನು ತಿನ್ನುವುದಿರಂದ ಸಸ್ಯಗಳಿಗೆ ಆಹಾರ ಕೊರತೆಯುಂಟಾಗಿ ಅವು ಇತರ ಬೆಳೆಯಲಾಗುವುದಿಲ್ಲ. ಇಂಥ ಪ್ರಾಣಿಗಳ ಬಾಯಿಗೆ ನಿಲುಕದ ಸಸ್ಯಗಳು ಮಾತ್ರ ಹಾನಿಗೊಳಗಾಗದೆ ಬೆಳೆಯುತ್ತವೆ. ಅನೇಕ ಗಿಡಗಳು ಪ್ರಾಣಿಗಳ ಪದಾಘಾತಕ್ಕೆ ಸಿಕ್ಕಿ ನಾಶವಾಗುವುದುಂಟು. ಹುಲ್ಲುಗಾವಲಿನಲ್ಲಿ ಮೇಲ್ಬಾಗದ ಹುಲ್ಲು ಹಾಳಾಗುತ್ತ ಹೋದಂತೆ, ಬೇರೆ ಬೇರೆ ಜಾತಿಯ ಸಸ್ಯಗಳ ಬೀಜಗಳು ಅಲ್ಲಿ ಮೊಳೆತು ಅಲ್ಲಿಯ ಸಸ್ಯಸಂಪತ್ತಿನ ಸ್ವರೂಪವೇ ಬದಲಾಗುತ್ತದೆ. ಬಿಲದಲ್ಲಿ ವಾಸಮಾಡುವ ಇಲಿ, ಹೆಗ್ಗಣ ಮುಂತಾದ ದಂಶಕಪ್ರಾಣಿಗಳಿಂದಲೂ ಸಸ್ಯಸಂಪತ್ತು ನಷ್ಟವಾಗುತ್ತದೆ.

	ಕಾಳು ಮತ್ತು ಹಣ್ಣುಗಳಲ್ಲಿ ಆಹಾರವಿರುವುದರಿಂದ ಹಲವಾರು ಪ್ರಾಣಿಗಳು, ಹಕ್ಕಿಗಳು, ಚಿಟ್ಟೆಗಳು, ಅಳಿಲುಗಳು ಅವನ್ನು ತಿನ್ನುತ್ತವೆ. ಇದರಿಂದ ಬೀಜಗಳ ಮೊತ್ತದಲ್ಲಿ ವರ್ಷೇ ವರ್ಷೇ ವ್ಯತ್ಯಾಸವಾಗುವುದುಂಟು. ಬೀಜೋತ್ಪತ್ತಿ ಸಹಜವಾಗಿಯೆ ಕಡಿಮೆಯಾಗಿದ್ದಲ್ಲಿ ಬೀಜ ತಿನ್ನುವ ಪ್ರಾಣಿಗಳು ಅವುಗಳನ್ನೆಲ್ಲ ಸಂಪೂರ್ಣವಾಗಿ ತಿಂದು ಹೊಸ ಗಿಡಗಳು ಬೆಳೆಯುವ ಹಾಗೆ ಮಾಡಬಹುದು. ದೊಡ್ಡಗಾತ್ರದ ಬೀಜಗಳು ಸಣ್ಣ ಬೀಜಗಳಿಗಿಂತ ಹೆಚ್ಚು ನಷ್ಟಕ್ಕೆ ಗುರಿಯಾಗುತ್ತವೆ. ಬೀಜಗಳನ್ನು ಬಿತ್ತಿ ಸಸ್ಯ ಸಂಪತ್ತನ್ನು ವೃದ್ಧಿಪಡಿಸಲು ಮಾಡುವ ಪ್ರಯತ್ನಗಳು, ಮೇಲ ಹೇಳಿದ ಕಾರಣಗಳಿಂದ ಕೆಲವು ಸಲ ಯಶಸ್ವಿಯಾಗದಿರಬಹುದು. ಬೆಂಕಿ ಬಿದ್ದು ನಷ್ಟವಾದ ಕಾಡುಗಳಲ್ಲಿ ಬೆಂಕಿಗೆ ಹೆದರಿ ಪ್ರಾಣಿಗಳು ಓಡಿಹೋಗುವುದರಿಂದ ಅಂಥ ಸ್ಥಳಗಳಲ್ಲಿ ಮಾತ್ರ ಬೀಜ ಬಿತ್ತುವುದರಿಂದ ಸಸ್ಯಸಂಪತ್ತನ್ನು ಹೆಚ್ಚಿಸಬಹುದು. ಕಂಬಳಿಹುಳು ಮತ್ತು ದುಂಬಿಗಳು ಕೂಡ ಎಳೆಯ ಸಸ್ಯಗಳನ್ನು ತಿಂದು ನಾಶಪಡಿಸುತ್ತವೆ.

	ಬಾತು, ಮೀನು ಮತ್ತಿತರ ಜಲಚರಗಳಿಗೆ ಜಲಸಸ್ಯಗಳು ಆಹಾರವನ್ನೂ ರಕ್ಷಣೆಯನ್ನೂ ನೀಡುವುದರಿಂದ ಮೀನುಗಾರಿಕೆಯಲ್ಲಿ ಮತ್ತು ಬಾತುಸಾಕಣೆಯಲ್ಲಿ ಇಂಥ ಸಸ್ಯಗಳನ್ನು ಬೆಳೆಸುವ ಕ್ರಮ ರೂಢಿಯಲ್ಲಿದೆ. ಅಲೆಗಳ ಹೊಡೆತಕ್ಕೆ ಸಿಕ್ಕಿರುವ ಕೆರೆ, ಕುಂಟೆಗಳ ಅಂಚಿನಲ್ಲಿ ಸಸ್ಯಗಳು ಬೆಳೆಯುವುದು ಕಡಿಮೆ. ಇಂಥ ಕಡೆ ಹಕ್ಕಿಗಳು ಮತ್ತು ಸಸ್ತನಿಗಳು ಇರುವುದಿಲ್ಲ. ನೀರಿನ ಮೇಲೆ ತೇಲುವ ಪ್ರಾಣಿಗಳು ಮೀನುಗಳಿಗೆ ಆಹಾರವಾಗಿರುವುದರಿಂದ ಮೀನುಗಳ ಮಾತ್ರ ಇರುತ್ತವೆ.

	ಜೌಗು ಪ್ರದೇಶದಲ್ಲಿ ಕೆಲವು ಸಸ್ಯಗಳು ಬೆಳೆಯುತ್ತವೆ. ಆದರೆ ಅವುಗಳಿಗೆ ಸಾಕಾಗುವಷ್ಟು ನೈಟ್ರೇಟ್ ಲವಣಗಳು ಅಲ್ಲಿ ದೊರೆಯುವುದಿಲ್ಲ. ಇಂಥ ಸಸ್ಯಗಳಲ್ಲಿ ಕೆಲವು ಕ್ರಿಮಿಕೀಟಗಳ ಮಾಂಸಗಳಿಂದ ನೈಟ್ರೋಜನ್ ವಸ್ತುಗಳನ್ನು ಪಡೆಯುತ್ತವೆ. ಕ್ರಿಮಿಕೀಟಗಳನ್ನು ಸೆರೆಹಿಡಿಯುವ ಸಲುವಾಗಿ ಈ ಸಸ್ಯಗಳ ಎಲೆಗಳು ಸೂಕ್ತರೀತಿಯಲ್ಲಿ ಮಾರ್ಪಾಡಾಗಿರುವುದುಂಟು. ಉದಾಹರಣೆಗೆ ಡ್ರಾಸಿರ, ನೆಪೆಂತಿಸ್, ಯೂಟ್ರಿಕ್ಯುಲೇರಿಯ ಇತ್ಯಾದಿ.

	ಸಸ್ಯಸಂಪತ್ತಿನ ಅಭಿವೃದ್ಧಿಯಲ್ಲಿ ಹೇಗೋ ಹಾಗೆಯೇ ಅದರ ವಿನಾಶದಲ್ಲಿ ಮಾನವನ ಪಾತ್ರ ಮುಖ್ಯವಾದ್ದು. ಅವನು ವ್ಯವಸಾಯಕ್ಕಾಗಿ ಕಾಡುಗಳನ್ನು ತರಿದುಹಾಕಿ ಇಲ್ಲವೆ ಬೆಂಕಿಯಿಟ್ಟು ನಾಶಮಾಡುತ್ತಾನೆ. ಇವರ ಚಟುವಟಿಕೆಯಿಂದ ಒಂದು ಪ್ರದೇಶದ ಮೂಲ ಸಸ್ಯಸಂಪತ್ತನ್ನು ನಾಶವಾಗಿ ಬೇರೆ ರೀತಿಯ ಸಸ್ಯ ಸಂಪತ್ತು ಅಸ್ತಿತ್ವಕ್ಕೆ ಬರಬಹುದು. ಹಾಗೆಯೇ ಮರಳುಗಾಡಿನಲ್ಲಿ ಕೂಡ ಮಾನವ ಹಣ್ಣಿನ ತೋಟಗಳನ್ನು ಬೆಳೆಸುವುದರ ಮೂಲಕ ಹೊಸ ಹೊಸ ತಳಿಗಳನ್ನು ತಂದುಹಾಕುವುದರ ಮೂಲಕ ಬರಡು ಪ್ರದೇಶಗಳಲ್ಲಿ ಮಣ್ಣು ಕೊಚ್ಚದ ಹಾಗೆ ಗಿಡಗಳನ್ನು ಬೆಳೆಸುವುದರ ಮೂಲಕ ಆತ ಸಸ್ಯಾಭಿವೃದ್ಧಿಗೂ ಕಾರಣನಾಗಿದ್ದಾನೆ.	
(ಎಚ್.ಎನ್.ಸಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ